Tuesday 25 April 2017

ಹಗಲು ಸೂರಪ್ಪ
ಕಾಣುವ ಸೂರು,
ಇರಳು ತಾರಕ್ಕ
ಇಣುಕು ಮಾಡು.

ಹಗಲಿರಲಿ ಇರುಳಿರಲಿ
ಏರು ಇಳಿಯಿಲ್ಲದ
ಏಕತಾನದ ಓಟ,
ಬದುಕಿನ ಆಟ.

ಇರುಳ ಕನಸುಗಳೆಂದೂ
ಹಗಲು ನನಸಾಗಲಿಲ್ಲ,
ತಾರಕ್ಕ, ಸೂರಪ್ಪ
ಮರೆಯಾದುದೊಂದೆ ಸತ್ಯ.

ನೋಡಲು ಇನಿತೇ ಎನಿಸಿದ
ಸನಿಹ ಇದೆ ಬಲು ದೂರ,
ಆ ದೂರ ಮುಟ್ಟುವುದೇ
ಎಂದೆಂದಿನ ಆತಂಕ..

ಆದರೂ ಕಸುವಿದೆ ಮೈಯಲ್ಲಿ,
ಛಲವಿದೆ ಮನದಲ್ಲಿ,
ಮುಟ್ಟುವೆನೊಂದು ದಿನ
ಶುಭ್ರ ನಿರ್ಮಲ ಬಯಲನು.

ಅಲ್ಲಿ ಸೂರಪ್ಪ ಬರುವ
ತೂರಿ ಎಲೆಗಳೆಡೆಯಲ್ಲಿ,
ಚಂದ್ರಮನಿಣುಕುವ
ರಾತ್ರಿಯ ತಂಬೆಳಕಿನಲಿ.

No comments:

Post a Comment