Sunday 2 April 2017

"ವೈರಾಗ್ಯವೆಂದರೆ ವಿರಕ್ತಿ=ಯಾವುದರ ಮೇಲೂ ಆಸೆಯಿಲ್ಲದಿರುವುದು,ಯಾವುದೂ ಬೇಡವೆನ್ನುವ ಭಾವ.
ಇಹ ಲೋಕ ತ್ಯಜಿಸಿದವರ ಅಂತಿಮ ದರ್ಶನಕ್ಕಾಗಿ ಬಂದ ಜನ:
'ಎಷ್ಟು ಗಳಿಸಿದರೇನು,ಎಷ್ಟೇ ಆಡಂಬರದಿಂದ ಜೀವನ ನಡೆಸಿದರೇನು ಎಲ್ಲರಿಗೂ ಸಾವು ಕಟ್ಟಿಟ್ಟ ಬುತ್ತಿ.ನಾವೆಲ್ಲರೂ ಸಹ ಒಂದಿಲ್ಲೊಂದು ದಿನ ಇಹಲೋಕ ತ್ಯಜಿಸುವವರೇ . ಹೋಗುವಾಗ ನಾವೇನೂ ತೆಗೆದುಕೊಂಡು ಹೋಗುವುದಿಲ್ಲ. ಇರುವಷ್ಟು ದಿನ ಎಲ್ಲರೊಂದಿಗೂ ಚೆನ್ನಾಗಿ ಇರಬೇಕು'
ಎಂದು ಹೇಳುತ್ತಾರೆ.ಸಾವಿನ ಮನೆಯಲ್ಲಿ/ಸ್ಮಶಾನದಲ್ಲಿ ತೋರ್ಪಡಿಸಿಕೊಳ್ಳುವ ವಿರಕ್ತಿ ಭಾವವನ್ನು 'ಸ್ಮಶಾನ ವೈರಾಗ್ಯ' ವೆನ್ನುತ್ತಾರೆ.
ಅದೇ ಜನ ನಂತರದ ದಿನಗಳಲ್ಲಿ ಮೊದಲಿನ ಹಾಗೇ , ಅಂದರೆ,ದರ್ಪ ತೋರುವುದು,ಎಲ್ಲವೂ ನನ್ನಿಂದಲೇ,ಎಲ್ಲವೂ ನನ್ನ ದೇ ಎಂದು ಅಹಂಕಾರ ದಿಂದ ಮೆರೆಯುತ್ತಾರೆ."

No comments:

Post a Comment