Sunday 2 April 2017

(ಇದು WhatsApp ನಲ್ಲಿ ಸ್ನೇಹಿತರೊಬ್ಬರು ಹಾಕಿದ ಒಂದು ಸಣ್ಣ ಕತೆ..... :-). ನೀತಿ ಚೆನ್ನಾಗಿದೆಯಾದರೂ, ಪಾತ್ರಧಾರಿಗಳ ಮತ್ತು ಸರಕಾರಗಳ ಬಗ್ಗೆ ನನ್ನದೇನೂ ಸ್ವಂತದ ಅಭಿಪ್ರಾಯಗಳಿಲ್ಲ... :-) ಆದರೆ, ಸತ್ತ ಗಿಳಿಯ ಬಗ್ಗೆ ಮರುಕವಿದೆ, ಖುಶಿಯಿಂದ ಬದುಕುತ್ತಿರುವ ಗಿಳಿಯ ಬಗ್ಗೆ ಮೆಚ್ಚಿಗೆ ಇದೆ.... :-) ಅಷ್ಟೆ.... :-)
*********************
#‎ಸಣ್ಣಕತೆ‬:ಎರಡು ಗಿಳಿಗಳು
==================
.
ಒಮ್ಮೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನೆಯಲ್ಲಿ ಸಾಕಲೆಂದು ಒಂದೊಂದು ಗಿಳಿಮರಿಯನ್ನು ಒಬ್ಬ ವ್ಯಾಪಾರಿಯಿಂದ ಕೊಂಡುಕೊಳ್ಳುತ್ತಾರೆ.ಇಬ್ಬರೂ ಬಹಳ ಪ್ರೀತಿ ಮತ್ತು ಕಾಳಜಿಯಿಂದ ಗಿಳಿಮರಿಯನ್ನು ಸಾಕುತ್ತಾರೆ.
ಹೀಗೆಯೇ ಒಂದು ವರ್ಷ ಉರುಳುತ್ತದೆ.ಗಿಳಿಮರಿಗಳನ್ನು ಮಾರಿದ ವ್ಯಾಪಾರಿಗೆ ಗಿಳಿಗಳು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಮನೆಯಲ್ಲಿ ಹೇಗಿವೆ ಎಂದು ನೋಡುವ ಕುತೂಹಲವಾಗುತ್ತದೆ.
ಮೊದಲು ಅವನು ಪ್ರಧಾನಿಗಳ ಮನೆಗೆ ಹೋಗುತ್ತಾನೆ.ಅಲ್ಲಿಗೆ ಹೋದಾಗ ಗಿಳಿ ಪಂಜರದಲ್ಲಿ ಇರಲಿಲ್ಲ.ವ್ಯಾಪಾರಿಗೆ ಸ್ವಲ್ಪ ಗಾಬರಿಯಾಗುತ್ತದೆ.'ಪ್ರಧಾನಿಗಳೇ,ನನ್ನಿಂದ ತೆಗೆದುಕೊಂಡು ಬಂದ ಗಿಳಿ ಏನಾಯಿತು...?'ಎಂದು ಕೇಳುತ್ತಾನೆ.ಅದಕ್ಕವರು,'ಅದು ತನ್ನ ಆಹಾರ ಸಂಪಾದಿಸಿಕೊಂಡು ಬರಲು ಬೆಳಗ್ಗೆ ಮನೆ ಬಿಟ್ಟಿದೆ.ಹೊಟ್ಟೆ ತುಂಬಿಸಿಕೊಂಡು ಸಂಜೆಯಾಗುವಾಗ ಮನೆಗೆ ಬರುತ್ತದೆ.ಆಮೇಲೆ ರಾತ್ರಿ ಮಲಗುವವರೆಗೆ ಮನೆ ತುಂಬಾ ಲವಲವಿಕೆಯಿಂದ ಓಡಾಡಿಕೊಂಡು ಇರುತ್ತದೆ.ಅಂತಹ ಕೌಶಲಾಭಿವೃದ್ಧಿಯನ್ನು ಗಿಳಿಯಲ್ಲಿ ನಾನು ಉಂಟುಮಾಡಿದ್ದೇನೆ.'ಎನ್ನುತ್ತಾರೆ.
ಅಷ್ಟು ಹೊತ್ತಿಗಾಗಲೇ ಗಿಳಿ ವಾಪಾಸು ಬಂದಿರುತ್ತದೆ.ಪಟಪಟ ಎಂದು ರೆಕ್ಕೆ ಬಡಿದುಕೊಂಡು ಆರೋಗ್ಯವಾಗಿರುವ ಗಿಳಿಯನ್ನು ಕಂಡು ವ್ಯಾಪಾರಿ ಸಂತೋಷದಿಂದ ಹಿಂದಿರುಗುತ್ತಾನೆ.
ಮರುದಿನ ಮುಖ್ಯಮಂತ್ರಿಗಳ ಗಿಳಿ ನೋಡಲು ಹೋಗುತ್ತಾನೆ.ಅಲ್ಲಿಗೆ ಹೋದಾಗಲೂ ಗಿಳಿ ಪಂಜರದಲ್ಲಿ ಇರೋದಿಲ್ಲ.ವಿಚಾರಿಸೋಣವೆಂದರೆ ಮುಖ್ಯಮಂತ್ರಿಗಳು ಮನೆಯಲ್ಲಿ ಇರೋದಿಲ್ಲ.
ಅಲ್ಲೇ ಇದ್ದ ಕೆಲಸದವನನ್ನು ಗಿಳಿಯ ಬಗ್ಗೆ ವಿಚಾರಿಸುತ್ತಾನೆ.ಅವನು,'ನಮ್ಮ ಸಾಹೇಬ್ರು ಬಹಳ ಮುದ್ದಿನಿಂದಲೇ ಗಿಳಿಯನ್ನು ಸಾಕ್ತ ಇದ್ರು.ಅದಕ್ಕೆ ಕಷ್ಟ ಆಗ್ಬರ್ದು ಅಂತ ಪಂಜರದೊಳಗೆಯೇ ಕೂತು ತಿನ್ನುವ "ಅನ್ನಭಾಗ್ಯ"ವ್ಯವಸ್ಥೆ ಮಾಡಿದ್ರು.ಯಾವಾಗಲೋ ಒಮ್ಮೆ ಗಿಳಿಯನ್ನು ಪಂಜರದೊಳಗಿಂದ ಹೊರಗೆ ಬಿಡ್ತಾ ಇದ್ರು.ಕೂತು ತಿಂದು ಮೈಭಾರ ಹೆಚ್ಚಿಸಿಕೊಂಡಿದ್ದ ಗಿಳಿ ತನಗೆ ರೆಕ್ಕೆ ಇದೆ ಎಂಬುದನ್ನೇ ಮರೆತುಬಿಟ್ಟಿತ್ತು.
ಒಮ್ಮೆ ನೆಲದ ಮೇಲೆ ಓಡಾಡ್ತ ಇರೋವಾಗ ಹೊರಗಿನಿಂದ ಬಂದ ಬೆಕ್ಕೊಂದು ಅದನ್ನು ಕಚ್ಚಿಕೊಂಡು ಹೋಯ್ತು.ನಮ್ಮ ಯಜಮಾನ್ರು ಅದಕ್ಕೆ ಬರೀ ತಿನ್ನೋಕ್ಕೆ ಕಲ್ಸಿದ್ರು,ಅದರ ಜೊತೆಗೆ ರೆಕ್ಕೆ ಬಿಚ್ಚಿ ಹಾರೋಕೂ ಕಲ್ಸಿದ್ರೆ ಗಿಳಿ ಇನ್ನಷ್ಟು ದಿನ ಬದ್ಕ್ ತ ಇತ್ತು.'ಅಂತ ಹೇಳಿದ.
ಇದನ್ನು ಕೇಳಿದ ವ್ಯಾಪಾರಿ ಗಿಳಿಯ ದೌರ್ಭಾಗ್ಯಕ್ಕೆ ಕಣ್ಣೀರಿಟ್ಟು ಅಲ್ಲಿಂದ ಹೊರಟುಹೋದ.
ಇದೆ ಮೋದಿ ಸರಕಾರ ಹಾಗು ಸಿದ್ದರಾಮಯ್ಯನ ಸರಕಾರಕ್ಕೆ ಇರುವ ವ್ಯತ್ಯಾಸ.. 👍

No comments:

Post a Comment