Sunday 2 April 2017



ಚೆಂದದ ಬೆನ್ನು ಹತ್ತಿ ಹೋದೆ
ಬೆಚ್ಚಿ ಬಿದ್ದೆ ಹಿಂದೆ ಪರ್ಸನಾಲಟಿ
ಮುಂದೆ ಮುನಿಸಿಪಾಲಿಟಿ ನೋಡಿ,
ಬುದ್ಧಿಯ ಬೆನ್ನು ಹತ್ತಿ ಹೋದೆ
ತಾಳ ಮೇಳ ಹೊಂದದೆ
ಬುದ್ದಿ ಶೂನ್ಯನಾಗಿ ಸೋತೆ
ಬೆಳಕೇ ನೀನೇ ದಾರಿ ದೀಪವೆಂದೆ
ದಾರಿಯೇ ಕಾಣದಷ್ಟು ಕತ್ತಲಲ್ಲಿ
ಕಣ್ಣು ಕಣ್ಣು ಪಿಳುಕಿಸಿದೆ
ಹೋಗಲಿ, ವಿದ್ಯೆ ಹಿಂದೆ ಹೋದೆ
ಆದರೆ ಕೊನೇ ಬೆಂಚಿನ
ಕಟ್ಟ ಕೊನೆಯವನಾದೆ
ನಗುವು ನನಗೆ ಖುಶಿಯೆಂದು
ಬೆನ್ನು ಹತ್ತಿದರೆ
ಉರಿ ಮೋರೆಗಳೇ ಎದುರಾದವು
ಕನಸುಗಳ ಬೆನ್ನಟ್ಟಿದೆ.
ಅಯ್ಯೋ ಬೆಪ್ಪೇ, ಇವು ಬರೆ ಕನಸುಗಳು
ಎಂದು ಅಣಕಿಸಿ ಮಾಯವಾದವು.
ಹೋಗಲಿ ನೋಡುವ ಎಂದು
ಮನಸುಗಳ ಹುಡುಕಿದೆ
ನನ್ನ ಮನಸೇ ನನ್ನಿಂದೆ ಮರೆಯಾಯ್ತು....
ಕೊನೇಗೆ ಕಾಣಿಸಿತು ಶೂನ್ಯ
ಇದೇ ಸರಿ ಎಂದು, ಶೂನ್ಯದಲ್ಲಿ
ಶೂನ್ಯನಾಗಿ ಲೀನನಾದೆ.........:-(
(repeat from memory).No automatic alt text available.

No comments:

Post a Comment