ಪ್ರೀತಿಯ ಕಾತರ
ಹೃದಯ ಮುಕ್ಕಾಗಿದೆ,
ಮನಸ್ಸು ಮುದುಡಿದೆ,
ಕಣ್ಣಾಲಿಗಳು ತುಂಬಿವೆ,
ಅರಿವು ತಳಮಳಿಸಿದೆ,
ಕಾಣಲಾರದೆ ನಿನ್ನ.
ಹಿಂದೆ ನೀ ಹೀಗಿರಲಿಲ್ಲ
ಎಲ್ಲಿ ಮಾಯವಾಯಿತು ಪ್ರೀತಿ,
ಅಳಿಸಿ ಹೋಯಿತೇ ನನ್ನ
ಹೆಸರು ನಿನ್ನೆದೆಯಾಳದಿಂದ?
ಒಮ್ಮೆ ಹಿಂತಿರುಗಿ ನೋಡು ನಲ್ಲೆ
ನಿನಗೆಂದೇ ಕಾದಿರುವೆ ನಾನಿಲ್ಲೆ.
ಇಲ್ಲಾ, ಹೇಳು ನೀನೆಲ್ಲಿ ಎಂದು,
ಬಂದೇ ಬಿಡುವೆ ನಾನಲ್ಲೇ ಇಂದು.
ಕೂಡಿ ಸಾಗೋಣ ಮುಂದೂ
ಬಾಳಿನುದ್ದಕ್ಕೂ ನಾವೇ ಎಂದು.
೧೯. ೦೩. ೨೦೧೪
ಹೃದಯ ಮುಕ್ಕಾಗಿದೆ,
ಮನಸ್ಸು ಮುದುಡಿದೆ,
ಕಣ್ಣಾಲಿಗಳು ತುಂಬಿವೆ,
ಅರಿವು ತಳಮಳಿಸಿದೆ,
ಕಾಣಲಾರದೆ ನಿನ್ನ.
ಹಿಂದೆ ನೀ ಹೀಗಿರಲಿಲ್ಲ
ಎಲ್ಲಿ ಮಾಯವಾಯಿತು ಪ್ರೀತಿ,
ಅಳಿಸಿ ಹೋಯಿತೇ ನನ್ನ
ಹೆಸರು ನಿನ್ನೆದೆಯಾಳದಿಂದ?
ಒಮ್ಮೆ ಹಿಂತಿರುಗಿ ನೋಡು ನಲ್ಲೆ
ನಿನಗೆಂದೇ ಕಾದಿರುವೆ ನಾನಿಲ್ಲೆ.
ಇಲ್ಲಾ, ಹೇಳು ನೀನೆಲ್ಲಿ ಎಂದು,
ಬಂದೇ ಬಿಡುವೆ ನಾನಲ್ಲೇ ಇಂದು.
ಕೂಡಿ ಸಾಗೋಣ ಮುಂದೂ
ಬಾಳಿನುದ್ದಕ್ಕೂ ನಾವೇ ಎಂದು.
೧೯. ೦೩. ೨೦೧೪
No comments:
Post a Comment