Friday, 13 June 2014

ಅಪಶಕುನ 

ಬೆಳಿಗ್ಗೆ ಶೇವ್ ಮಾಡುವಾಗ
ಕನ್ನಡಿ ಬಿದ್ದು ಚೂರು ಚೂರಾಯ್ತು.
ನನ್ನದೇ ಮುಖದ ಹತ್ತಾರು
ತುಣುಕುಗಳು ನನ್ನನ್ನು ಅಣಕಿಸಿದವು
ಹೆಂಡತಿ ಉವಾಚ "ಅಪಶಕುನ,
ಬೆಳಿಗ್ಗೆ, ಬೆಳಿಗ್ಗೆ, ಯಾರ ಮುಖ ನೋಡಿದಿರಿ?"
ಉತ್ತರ ಕೊಡದೆ ಸುಮ್ಮನಿದ್ದು,
ಒಡೆದ ಕನ್ನಡಿ ಚೂರುಗಳನ್ನು
ಒಗೆಯಲು ಒಟ್ಟು ಮಾಡತೊಡಗಿದೆ.
ನೋಡಿದ್ದು ಅವಳದ್ದೇ ಮುಖ ಎಂದು
ಅವಳಿಗೇ ಮರೆತಂತಿತ್ತು.
ನನಗೆ ಹೇಳುವ ಧೈರ್ಯವಾಗಲಿಲ್ಲ.

೦೯. ೦೩. ೨೦೧೪

No comments:

Post a Comment