ಚೆಂದಿರ
ಮುಳುಗುವ ಸೂರ್ಯನ ಕಂಡು
ಅದಾಗಲೇ ಉದಿಸಿದ್ದ
ಚಂದಿರನೆಂದ ನಸುನಗುತ
ಆಯಿತೇ ನಿನ್ನ ಉರಿ ಹಚ್ಚುವ
ಕೆಲಸ, ಮುಗಿಯಿತೇ ನಿನ್ನುರಿತ,
ಬಂದಿಹೆ ನಾನೀಗ, ತಂಪಾಗಿಸುವೆ
ಈ ಭುವಿಯ, ಮಲಗಿ ಜನ ನಿದಿರಿಸಲಿ
ಸುಖ ಸ್ವಪ್ನಗಳಲಿ ತೇಲಿ,
ಮತ್ತೆ ನಾಳೆ ಬರುವ ನಿನ್ನನ್ನು
ಎದುರಿಸಲು ಗಟ್ಟಿ ಆಗಬೇಕಲ್ಲ ಅವರು!
೨೩. ೦೩. ೨೦೧೪
ಮುಳುಗುವ ಸೂರ್ಯನ ಕಂಡು
ಅದಾಗಲೇ ಉದಿಸಿದ್ದ
ಚಂದಿರನೆಂದ ನಸುನಗುತ
ಆಯಿತೇ ನಿನ್ನ ಉರಿ ಹಚ್ಚುವ
ಕೆಲಸ, ಮುಗಿಯಿತೇ ನಿನ್ನುರಿತ,
ಬಂದಿಹೆ ನಾನೀಗ, ತಂಪಾಗಿಸುವೆ
ಈ ಭುವಿಯ, ಮಲಗಿ ಜನ ನಿದಿರಿಸಲಿ
ಸುಖ ಸ್ವಪ್ನಗಳಲಿ ತೇಲಿ,
ಮತ್ತೆ ನಾಳೆ ಬರುವ ನಿನ್ನನ್ನು
ಎದುರಿಸಲು ಗಟ್ಟಿ ಆಗಬೇಕಲ್ಲ ಅವರು!
೨೩. ೦೩. ೨೦೧೪
No comments:
Post a Comment