Sunday, 15 June 2014

ತಾಯಿಯ ಮಮತೆ
==========

ತಾಯಿಯ ಮಡಿಲು
ಕೋಟಿ ಆಸ್ತಿಯ ಸಮವೋ
ತಾಯಿಯ ನೋಟವು
ಪರಿಸರದ ಸೌಂದರ್ಯವೋ

ತಾಯಿಯ ನುಡಿಯು
ಪಕ್ಷಿಗಳ ಚಿಲಿಪಿಲಿಯಷ್ಟು ಮಧುರವೋ
ತಾಯಿಯ ಮನಸ್ಸು
ಒಂದು ಮುದ್ದಾದ ಕೂಸೋ

ತಾಯಿಯೇ ಇಲ್ಲದ ಕೂಸು
ಕಣ್ಣೀರಿಗೆ ತುತ್ತಾಗುವುದು
ತಾಯಿಯು ಇದ್ದ ಕೂಸು
ಕಣ್ತುಂಬಾ ಕುಶಲತೆ ತುಂಬಿರುವುದು

ತಾಯಿಯು ಇದ್ದ ಮಗುವಿಗೆ
ಭಯವೇ ಇಲ್ಲವೋ
ತಾಯಿಯೇ ಮಗುವಿಗೆ
ದೈವವೋ.

(ಸಂಯುಕ್ತ ಕರ್ನಾಟಕ - Feb.22 - ಕಿಂದರಿ ಜೋಗಿ ಪುರವಣಿಯಲ್ಲಿ ಚಿ.ಶಿರೀಷ 8ನೇ ತರಗತಿಯ ಹುಡುಗ ಬರೆದ ಕವನ - ಬೆಳೆಯ ಸಿರಿ ಮೊಳಕೆಯಲ್ಲಿ ಅನ್ನಿಸುತ್ತದೆ)


23.02.2014

No comments:

Post a Comment