Sunday, 15 June 2014

ಬೇಂದ್ರೆಯವರ ನೆನಪು 

ಇವತ್ತು ಯಾಕೋ ಪೂಜ್ಯ ಬೇಂದ್ರೆಯವರು ನೆನಪಾದರು.
ಅವರದೊಂದು ಕವನ "ಮೂಡಲ ಮನೆಯ ಮುತ್ತಿನ...."
ನಾನು ಹೈ ಸ್ಕೂಲಿನಲ್ಲಿ ಓದುವಾಗ, ಕನ್ನಡ ಟೆಕ್ಸ್ಟ್ ಬುಕ್ಕಿನಲ್ಲಿತ್ತು.
ಅದನ್ನು ಇನ್ನೊಮ್ಮೆ ನೆನಪು ಮಾಡಿ ಕೊಳ್ಳುತಿದ್ದೇನೆ.

ಮೂಡಲ ಮನೆಯ ಮುತ್ತಿನ ನೀರಿನ...
==================
ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ

ಬಾಗಿಲು ತೆರೆದು ಬೆಳಕು ಹರಿದು
ಜಗವೆಲ್ಲ ತೊಯ್ದ, ದೇವಾನು ಜಗವೆಲ್ಲ ತೊಯ್ದ

ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದ ಬಿಂದು, ಕಂಡವು ಅಮೃತದ ಬಿಂದು

ಯಾರಿರಿಸೀಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು, ಹಕ್ಕಿಗಳ ಹಾಡು

ಗಂಧರ್ವ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು, ಕಾಡಿನ ನಾಡು.

-ದ.ರಾ.ಬೇಂದ್ರೆ.


27.02.2014

No comments:

Post a Comment