Friday, 13 June 2014

ನಿನ್ನಂದವೇ ಅಂದ 

ಸಂಜೆಯ ತಂಗಾಳಿಗೆ
ನಲಿಯುವ ನಿನ್ನ 
ಮುಂಗುರುಳು,
ಕಣ್ಣಂಚಿನ ಕಾತರದ
ನೋಟ,
ನನ್ನ ಕರೆಗೆ ಓಗೊಡಲು
ಕಾದಿರುವ
ಅರೆ ಬಿರಿದ ತುಟಿಗಳು
ತುಸು ನಾಚಿ ಕೆಂಪೇರಿದ
ತುಂಬು ಕೆನ್ನೆಗಳು
ನಿನ್ನಂದವೇ ಅಂದ
ನನ್ನ ನಲ್ಲೆ,
ನೀ ಎಂದೆಂದಿಗೂ ನಿಲ್ಲೆ
ನನ್ನೆದೆಯಲ್ಲೆ.


೦೮. ೦೩. ೨೦೧೪

No comments:

Post a Comment