Thursday, 12 June 2014

ಕಾಲನ ದಾರಿ.


ಬಾನಂಚಿನ ಹೊಂಗಿರಣದಿಂದ
ಪೂರ್ಣ ಕಡಲೇ ಹೊನ್ನಾಯಿತು,
ಹೊನ್ನೀರ ಅಲೆಗಳು ತಡಿಗೆ ಬಡಿದು
ಮರಳೂ ಬಂಗಾರವಾಯಿತು.

ಮತ್ತೆ ಬಂತು ನೇಸರ ತೇರು
ಕವಿದ ಕತ್ತಲ ಸರಿಸುತ,
ಸರಿಸುತ ಭುವಿಗಿಳಿದು ಬಂತು,
ಮನದ ಜಡವನೂ ಸರಿಸುತ

ಮತ್ತದೇ ಹೊನ್ನ ಸಂಜೆ
ಬಂಗಾರದ ಅಲೆಗಳ ವಯ್ಯಾರ,
ಕುಣಿದು ಕುಪ್ಪಳಿಸಿ ಧರೆಗೆ ಅಪ್ಪಳಿಸಿ,
ಹಿಂದೆ ಸರಿದು ಕತ್ತಲೆಗೆ ದಾರಿ,

ಇದೇ ಕಾಲನ ದಾರಿ,
ಇದೇ ಜೀವನದ ಹಾದಿ... :-)






No comments:

Post a Comment