ಸೇರಿದೆ ಅಮ್ಮನ ಮಡಿಲು
ಅಂಕು ಡೊಂಕಿನ ಹಾದಿ,
ಗುಡ್ಡ ಬೆಟ್ಟಗಳ ಬಳಸಿ,
ಕೊಳ್ಳ ಕಂದರಗಳಲಿ ಇಳಿದು,
ಬಯಲು ಸೀಮೆಯಲಿ
ಸೀದಾ ಸಾಗಿ,
ಅಂತೂ ತಲುಪಿದೆನು,
ನಮ್ಮೂರ,
ತಲುಪಿದೆನು
ಕಾಯುತಿಹ
ತಾಯಿಯ ಮಡಿಲಿನಲಿ,
ಮಲಗಿದೆನು ಅಮ್ಮ ಎಂದು
ಕರೆದು ಕಣ್ಮುಚ್ಚಿ
"ಬಂದೆಯಾ ನನ್ನ ಕಂದ"
ಎಂದೆನ್ನ ಕೂದಲುಗಳಲ್ಲಿ
ಕೈಯಾಡಿಸಿ ಖುಷಿ ಪಟ್ಟಳು,
ಮುದಗೊಂಡಳು ನನ್ನಮ್ಮ,
ಪ್ರೀತಿಯ ಕಡಲು ನನ್ನಮ್ಮ
೨೫. ೦೩. ೨೦೧೪
ಅಂಕು ಡೊಂಕಿನ ಹಾದಿ,
ಗುಡ್ಡ ಬೆಟ್ಟಗಳ ಬಳಸಿ,
ಕೊಳ್ಳ ಕಂದರಗಳಲಿ ಇಳಿದು,
ಬಯಲು ಸೀಮೆಯಲಿ
ಸೀದಾ ಸಾಗಿ,
ಅಂತೂ ತಲುಪಿದೆನು,
ನಮ್ಮೂರ,
ತಲುಪಿದೆನು
ಕಾಯುತಿಹ
ತಾಯಿಯ ಮಡಿಲಿನಲಿ,
ಮಲಗಿದೆನು ಅಮ್ಮ ಎಂದು
ಕರೆದು ಕಣ್ಮುಚ್ಚಿ
"ಬಂದೆಯಾ ನನ್ನ ಕಂದ"
ಎಂದೆನ್ನ ಕೂದಲುಗಳಲ್ಲಿ
ಕೈಯಾಡಿಸಿ ಖುಷಿ ಪಟ್ಟಳು,
ಮುದಗೊಂಡಳು ನನ್ನಮ್ಮ,
ಪ್ರೀತಿಯ ಕಡಲು ನನ್ನಮ್ಮ
೨೫. ೦೩. ೨೦೧೪
No comments:
Post a Comment