Thursday, 12 June 2014

ಬಾ  ಹೊರಗೆ ಖಿನ್ನತೆಯಿಂದ 

ನಿರಾಶೆಯ ಮಡುವಿನಲ್ಲಿ,
ಖಿನ್ನತೆಯ ಪರಾಕಾಷ್ಠೆಯಲ್ಲಿ,
ಕಂಠ ಪೂರ್ತಿ ಮುಳುಗಿ
ಆತ್ಮಹತ್ಯೆಗೆ ಅಂಜುತ್ತಿದ್ದ
ನನ್ನ ಸ್ನೇಹಿತನೊಬ್ಬ
ಅಂದ ಮಾತು
"ಬಹಳ ಮಂದಿ ಹಾರ್ಟ್ ಫೈಲ್
ಆಗಿ ಸಾಯುತ್ತಾರೆ, ಆ ರೀತಿ
ಸುಖದ ಸಾವು ನನಗೂ 
ಬರಬಾರದೇ?"
ನಾನಂದೆ ಅವನಿಗೆ,
"ನಿನ್ನ ಮನಸ್ಸು ದುರ್ಬಲವಾಗಿದೆ,
ಹೃದಯ ಬಲವಾಗಿದೆ,
ಬಾ ಹೊರಗೆ ನಿರಾಶೆ, ಖಿನ್ನತೆಯಿಂದ,
ಜಗತ್ತು ವಿಶಾಲವಾಗಿದೆ,
ಎದುರಿಸಿ ಬದುಕು, ಸಾವ ಕಾಯ ಬೇಡ,
ಸುಖದ ದಿನಗಳನ್ನು ಕಾಯು,
ಬಂದೇ ಬರುವುದು ಸುಖದ ಕಾಲ."
ಉಪದೇಶವಲ್ಲದೆ ಬೇರೇನು ಹೇಳಲಿ?


೨೪. ೦೩. ೨೦೧೪

No comments:

Post a Comment