Friday, 13 June 2014

ಹೆಣ್ಣು, ಮಣ್ಣು, ಹೊನ್ನು 

ಹೆಣ್ಣು, ಹೊನ್ನು, ಮಣ್ಣು
ಮಾಯೆ ಎನ್ನುತ್ತವೆ 
ನಮ್ಮ ಪುರಾಣಗಳು.
ಆದರೆ, ಈ ಮೂರೂ
ಇಲ್ಲದ ಬದುಕಿದೆಯೇ?
ಹೆಣ್ಣು ವಾತ್ಸಲ್ಯಮಯಿ ತಾಯಿ,
ಹೆಣ್ಣು ಹೃದಯ
ತುಂಬುವ ನಲ್ಲೆ,
ಹೆಣ್ಣು ನಲ್ಮೆಯ ಅಕ್ಕ, ತಂಗಿ,
ಹೀಗೆ ಸಕಲ ಸಂಬಂಧಗಳ
ಮೂಲವೇ ಹೆಣ್ಣು.
ಹಾಗೇನೇ ಹೊನ್ನು,
ಹೊನ್ನಿಲ್ಲದೆ ಏನೂ ಸಿಗದು,
ಹೊನ್ನೇ ಜೀವನದ ಜೀವಾಳ.
ಇನ್ನು ಮಣ್ಣು, ಮಣ್ಣಿನ ಮೇಲೇ
ನಮ್ಮ ಮನೆ, ಮಣ್ಣೇ ನಮ್ಮ
ಜೀವಾಧಾರ,
ಮಣ್ಣೇ ನಮ್ಮ ಕೊನೆಯ ನೆಲೆ.
ಹಾಗಾದರೆ, ಮಾಯೆ ಎಲ್ಲಿ ಬಂತು?
ಮಿತಿಯಲ್ಲಿದ್ದರೆ ಮೂರೂ
ನಮ್ಮ ಜೀವ. ಆಸೆ ಹೆಚ್ಚಾಗಿ
ಅತಿಯಾದರೆ ಮೂರೂ
ನಮ್ಮನ್ನಾವರಿಸಿ ನುಂಗುವ ಮಾಯೆ


೧೭. ೦೩. ೨೦೧೪

No comments:

Post a Comment