Thursday, 12 June 2014

ಜ್ಯೋತಿಷ್ಯ ಮತ್ತು  ಮೌಡ್ಯ  

ಆತ್ಮ ವಿಶ್ವಾಸವಿಲ್ಲದ ಜನರ ಮೌಢ್ಯವೇ ಕೆಲವು ಜ್ಯೋತಿಶಿಗಳ ಬಂಡವಾಳ. ಅವರು ಮಾಡುವುದು mass mesmrism. ಒಮ್ಮೆ ಒಬ್ಬ tv ಜೋತಿಷಿ ಅಂದ. ಒಂದು ಶುಭದಿನ (ಅವನು ಹೇಳಿದ) ಐದು ಎಣ್ಣೆಗಳ ಮಿಶ್ರಣದಿಂದ ಯಾವದಾದರೂ ದೇವಸ್ಥಾನದ ಎದುರು ಐದು ಪಣತೆ ಹಚ್ಚಬೇಕು ಎಂದು. ಆ ದಿನ ಲಕ್ಷಾಂತರ ಜನ ಈ ಕೆಲಸ ಮಾಡಿದರು. ನನ್ನಾಕೆನೂ ಈ ಕೆಲಸ ಮಾಡಲು ನನ್ನನ್ನು ಆ ದಿನ ಎಳೆದು ಕೊಂಡು ಹೋಗಿದ್ದಳು. !!!!!!!! ಆ ದಿನ ಎಣ್ಣೆ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಬಿಸಿನೆಸ್, ಪಣತೆ ಮಾರುವವರಿಗೂ ವ್ಯಾಪಾರವೇ ವ್ಯಾಪಾರ. ನೋಡಿ, ಜ್ಯೋತಿಷಿಗಳ ಮಾತಿಗೆ ಜನರು ಹೇಗೆ ಮರುಳಾಗುತ್ತಾರೆಂದು. ಹೀಗೇ, ಬಿಳಿ ಕುದುರೆಗೆ ಕರಿ ಕಡಲೆ ತಿನಿಸಿ, ಕರಿ ಕುದುರೆಗೆ ಬಿಳಿ ಜೋಳ ತಿನಿಸಿ ಎಂದೆಲ್ಲಾ ಹೇಳುವ ಜ್ಯೋತಿಷಿಗಳೂ ಇದ್ದಾರೆ. ಏನಂತೀರಿ? ಜ್ಯೋತಿಷ್ಯ ಶಾಸ್ತ್ರ ಪೂರ್ಣ ಸುಳ್ಳೆಂದು ನಾನು ಹೇಳುವುದಿಲ್ಲ. ಆದರೆ ಅದನ್ನು ನಿಜವಾಗಿ ಕಲಿತು ಜನರಿಗೆ ಮಾರ್ಗದರ್ಶನ ಮಾಡುವವರು ಎಷ್ಟು ಮಂದಿ ಜ್ಯೋತಿಷಿಗಳಿದ್ದಾರೆ ಎನ್ನುವುದು ಗೊತ್ತಿಲ್ಲ.

No comments:

Post a Comment