Thursday, 12 June 2014

ಅಯ್ಯೋ, ನನ್ನ ಮನೆ.... 

ನನ್ನ ಮನೆ ಕೊನೆಗೊಮ್ಮೆ
ತೊರೆಯಲೇ ಬೇಕಾಯ್ತು,

ನನ್ನ ಅಪ್ಪ ಅಮ್ಮ ಕಟ್ಟಿ
ಹಾಲುಣಿಸಿ, ಕೈತುತ್ತು ಹಾಕಿ
ಬೆಳೆಸಿದ ಮನೆಯಲ್ಲಿ
ನನಗೆ ಆಸರೆ ಇಲ್ಲವಾಯಿತು.

ಬಿದ್ದು ಹೋಯಿತು ಮನೆ 
ನನ್ನ ಕಣ್ಣೆದುರೇ ಅದನ್ನು
ಸುಟ್ಟು ಬೂದಿ ಮಾಡಿದರು

ಇನ್ನಿಲ್ಲಿ ಜಾಗ ನಿನಗಿಲ್ಲವೆಂದು
ಕಳಿಸಿಬಿಟ್ಟರು ಮುಂದೆ ಹೋಗೆಂದು.

********************************

No comments:

Post a Comment