Friday, 6 June 2014

ಕಳವು, ಒಂದು ನೆನಪು... 

ಆಮೃತೇಶ್ವರಿ ಹಬ್ಬಕ್ಕೆ ಹೋಗಲಿಕ್ಕೆ ದುಡ್ಡು ಕೊಡಲಿಲ್ಲವೆಂದು 
ನಾಲ್ಕಾಣೆ ಕದ್ದೆ ಚಿಕ್ಕಂದಿನಲ್ಲಿ ಬುದ್ದಿ ತಿಳಿದಿಲ್ಲದಾಗ.

ಅಜ್ಜ ಹೊಡೆದರು ಮೈ ಮೇಲೆ ಬಾಸುಂಡೆ ಬರುವಂತೆ..

ಈಗ ಕೋಟಿ ಕೋಟಿ ಕದಿಯುವವರಿಗೆ ಚಿಕ್ಕಂದಿನಲ್ಲಿ
ಅವರಜ್ಜ ಹೊಡೆದಿರಲಿಲ್ಲವೇ ?

ಅಥವಾ ಅವರು ಚಿಕ್ಕಂದಿನಲ್ಲಿ
ಕದಿಯಲೇ ಇಲ್ಲವೇ? ಅಥವಾ

ಮುಂದೆ ದೊಡ್ಡವರಾದಾಗ ದೊಡ್ಡದು
ಕದಿಯೋಣ ಅಂತ ನೆನಸಿದರೇ?

೨೦. ೧೨. ೨೦೧೩.

No comments:

Post a Comment