Thursday, 12 June 2014

ಕೋಗಿಲೆ ಗಾನ 

ಕುಹೂ ಕುಹೂ
ಎಂದು ಉಲಿಯುವ
ಇಂಪು ಕಂಠದ
ಕೋಗಿಲೆ ಕಾಣದು ಕಣ್ಣಿಗೆ,
ಯಾವುದೋ ಮರದೆದೆಯಲ್ಲಿ
ಕುಳಿತು ಹಾಡುವ ಗೀತೆ
ಪ್ರೇಮಗೀತೆಯೋ,
ವಿರಹಗೀತೆಯೋ !!!
ಕರೆದು ಕೇಳ ಬೇಕಿನಿಸುತ್ತಿದೆ ನನಗೆ
ನಿನ್ನ ಮನದಲ್ಲಿದೆಯೇನೆಂದು, 
ಸಿಗಲಿಲ್ಲ ಹಕ್ಕಿ
ಮರೆಯಲ್ಲೇ ಕುಳಿತರಬೇಕು,
ಏನಾದರೇನು
ಪ್ರತಿ ಬೆಳಗು ಮಾತ್ರ
ಕುಹೂ ಕುಹೂ ಇಂಚರದೊಂದಿಗೆ.

No comments:

Post a Comment