Thursday, 12 June 2014

ಬದುಕೊಂದು ಭಾವಗೀತೆ 

ಬದುಕನ್ನು ಭಾವಗೀತೆಯಂತೆ
ಬದುಕ ಬೇಕಂತೆ,
ಆದರೆ ಭಾವ ಗೀತೆಗೆ 
ಭಾವಾರ್ಥ ಬರೆಯುವವರಿದ್ದಾರೆ,
ಬದುಕಿಗೆ ಅರ್ಥ ಬರೆಯುವವರಾರು,
ಬದುಕಿನ ಗೀತೆ ಬರೆಯುವ ಮೊದಲೇ,
ವಿಧಿ ಅದರ ಭಾವಾರ್ಥ ಬರೆದಿಟ್ಟಿದೆ
ಎಂದು ಸ್ವಾಮೀಜಿ ಹೇಳುತ್ತಾರೆ,
ಇಲ್ಲ, ಬದುಕು ಮುಗಿದ ನಂತರ 
ಭಾವಾರ್ಥ ಬರೆಯಲಾಗುತ್ತೆ
ಅಂತ ಸನ್ಯಾಸಿ ಹೇಳುತ್ತಾನೆ.
ಬದುಕಿಗೆ ಅರ್ಥವೇ ಇಲ್ಲ ಅಂತ
ನಾಸ್ತಿಕ ಹೇಳುತ್ತಾನೆ.
ಯಾವುದು ಸರಿ ಎಂಬುದು
ಆ ದೇವರಿದ್ದರೆ ಅವನಿಗೆ ಗೊತ್ತು.

No comments:

Post a Comment